Kasthoori Kannada: Shri Ganesha Prarthane

Tuesday, May 24, 2011

Shri Ganesha Prarthane



ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ

ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು ನೋಡೋಕೆ ಚೆನ್ನ || 2 ||
ಗರಿಕೆ ತಂದರೆ ನೀನು
ಕೊಡುವೆ ವಾರವನ್ನ
ಗತಿ ನೀನೆ ಗಣಪನೆ ಕೈ ಹಿಡಿಯೋ ಮುನ್ನ
                                               || ಶರಣು ಶರಣಯ್ಯ||

ಸೂರ್ಯನೆದುರಲಿ ಮಂಜು ಕರಗುವ ರೀತಿ
ನಿನ್ನ ನೆನೆಯಲು ಒಡನೆ ಓಡುವುದು ಭೀತಿ
ನೀಡಯ್ಯ ಬಾಳೆಲ್ಲ ಬೆಳಗುವ ಶಕುತಿ
ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ
                                               || ಶರಣು ಶರಣಯ್ಯ||

ಬೆನಕ ಬೆನಕ ಏಕದಂತ
ಪಚ್ಚೆಕಲ್ಲುಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರ ನಿನಗೆ
ಇಪ್ಪತ್ತೊಂದು ನಮಸ್ಕಾರಗಳು

No comments:

Post a Comment